ಬಿಗ್ ಬಾಸ್ ಕನ್ನಡ ಸೀಸನ್ 5 : ಚಂದನ್ ಶೆಟ್ಟಿ ಮೇಲೆ ಟರ್ಕಿಶ್ ಹುಡುಗಿ ಕಣ್ಣು | FIlmibeat Kannada

2017-11-04 1

ಪ್ರತಿಭಾವಂತ ಗಾಯಕ ಚಂದನ್ ಶೆಟ್ಟಿ ರನ್ನ ನೋಡಿ ಟರ್ಕಿಶ್ ಹುಡುಗಿ ಕ್ಲೀನ್ ಬೌಲ್ಡ್ ಆಗಿದ್ದಳಂತೆ. ಹಾಗಂತ 'ಬಿಗ್ ಬಾಸ್' ಮನೆಯಲ್ಲಿ ಚಂದನ್ ಶೆಟ್ಟಿ ಬಾಯ್ಬಿಟ್ಟಿದ್ದಾರೆ. ಇನ್ಸ್ ಟಾಗ್ರಾಮ್ ನಲ್ಲಿ ಚಂದನ್ ಶೆಟ್ಟಿ ಹಾಗೂ ಟರ್ಕಿಶ್ ಹುಡುಗಿ ಫ್ರೆಂಡ್ಸ್ ಆಗಿದ್ದರಂತೆ. ಚಂದನ್ ಶೆಟ್ಟಿ ಜೊತೆ ಚಾಟಿಂಗ್ ಮಾಡುತ್ತಿದ್ದ ಆ ಹುಡುಗಿ ಇದ್ದಕ್ಕಿದ್ದಂತೆ 'ಮದುವೆ ಆಗೋಣ' ಎಂದು ಹೇಳಿದ್ದಳಂತೆ.''ಇನ್ಸ್ ಟಾಗ್ರಾಮ್ ನಲ್ಲಿ ಟರ್ಕಿಶ್ ಹುಡುಗಿ ಮೆಸೇಜ್ ಮಾಡಲು ಶುರು ಮಾಡಿದಳು. ಎರಡನೇ ದಿನ ಮದುವೆ ಆಗೋಣ ಎಂದಳು. ಅವಳಿಗೆ ಇಂಗ್ಲೀಷ್ ಬರಲ್ಲ. ನಾವು ಗೂಗಲ್ ಟ್ರಾನ್ಸ್ ಲೇಟರ್ ಬಳಸಿ ಚಾಟ್ ಮಾಡುತ್ತಿದ್ವಿ'' ಎಂದು ಲಿವಿಂಗ್ ಏರಿಯಾದಲ್ಲಿ ಕಸ ಗುಡಿಸುವಾಗ ಚಂದನ್ ಶೆಟ್ಟಿ, ಆಶಿತಾ ಬಳಿ ಹೇಳಿದರು. ಟರ್ಕಿಶ್ ಹುಡುಗಿ ಜೊತೆ ಎರಡು ದಿನ ಚಾಟಿಂಗ್ ಮಾಡಿದ ಚಂದನ್ ಶೆಟ್ಟಿ ನಂತರ ಬೋರ್ ಆಯ್ತು ಅಂತ ಚಾಟಿಂಗ್ ನಿಲ್ಲಿಸಿಬಿಟ್ಟರಂತೆ.

Videos similaires